ಉತ್ತರಾಖಂಡದ ಉತ್ತರ ಕಾಶಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಬಾರ್ಕೋಟ್-ಯಮುನೋತ್ರಿ ರಸ್ತೆಯ ಬಾಲಿಗಢದಲ್ಲಿ ಭಾನುವಾರ ಬೆಳಿಗ್ಗೆ ಹಠಾತ್ ಮೇಘಸ್ಫೋಟ ಸಂಭವಿಸಿದ್ದು, ನಿರ್ಮಾಣ ಹಂತದಲ್ಲಿರುವ ಹೋಟೆಲ್ಗೆ ಹಾನಿಯುಂಟಾಗಿದೆ. ಎಂಟರಿಂದ ಒಂಬತ್ತು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.