ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ 30 ಗ್ರಾಂ ಚಿನ್ನ ಇರುವ ಬ್ಯಾಗ್ ಅನ್ನು ವಾಪಸ್ ಪ್ರಯಾಣಿಕರಿಗೆ ಹಿಂತಿರುಗಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿರುವಂತಹ ಘಟನೆ ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಿರುಪತಿ ಚೌಹಾಣ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಚಾಲಕನ ಪ್ರಾಮಾಣಿಕತೆ ಕಂಡು ಪೊಲೀಸರು ಸನ್ಮಾನಿಸಿದ್ದಾರೆ.