ತಿರುಪತಿ ತಿಮ್ಮಪ್ಪನ ಪರಮ ಭಕ್ತರಿಗೆ ವಿಐಪಿ ವಿಶೇಷ ದರ್ಶನ

ತಿರುಮಲ ತಿರುಪತಿ ದೇವಸ್ಥಾನವು ರಾಮ ಕೋಟಿಯ ಮಾದರಿಯಲ್ಲಿ 'ಗೋವಿಂದ ಕೋಟಿ' ಎಂಬ (Govinda Namavali) ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಟಿಟಿಡಿ ಛೇರ್ಮನ್​ ಭೂಮನ ಕರುಣಾಕರ ರೆಡ್ಡಿ ಮಾತನಾಡಿ, ಇಂದಿನ ಯುವಜನರಲ್ಲಿ ಭಕ್ತಿ ಭಾವವನ್ನು (Spiritual) ಹೆಚ್ಚಿಸಲು ಹಾಗೂ ಸನಾತನ ಧರ್ಮದ ಬಗ್ಗೆ ವ್ಯಾಪಕ ಪ್ರಚಾರ ಮಾಡಲು ಈ ಕಾರ್ಯಕ್ರಮ ಉಪಯುಕ್ತವಾಗಲಿದೆ. ಅಷ್ಟೇ ಅಲ್ಲ, ‘ಗೋವಿಂದ ಕೋಟಿ’ ಬರೆದ ಮಕ್ಕಳು, ಯುವಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ತಿರುಮಲ ಬೆಟ್ಟದಲ್ಲಿ ಒಮ್ಮೆ ಶ್ರೀವಾರು ತಿಮ್ಮಪ್ಪನ (Lord venkateswara) ವಿಐಪಿ ಬ್ರೇಕ್ ದರ್ಶನ ನೀಡುವುದಾಗಿ ಘೋಷಿಸಿದ್ದಾರೆ.