ಬೆಂ. ಉತ್ತರ: ನೂರಾರು ಮರಗಳನ್ನು ಕ್ಷಣಾರ್ಧದಲ್ಲಿ ಕೊಚ್ಚಿಹಾಕಿದರು

ನೂರಾರು ಮರಗಳು.. ಹತ್ತಾರು ವರ್ಷದಿಂದ ಸೊಂಪಾಗಿ ಬೆಳೆದಿದ್ದ ಆ ಮರಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತಿದ್ದವು.. ಸರ್ಕಾರಿ ಜಾಗದಲ್ಲಿದ್ದ ಅದೇ ಮರಗಳ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿತ್ತು.. ಅಷ್ಟೇ ನಡೆದಿದ್ದು ಮಾರಣಹೋಮ.. ಇಷ್ಟು ದಿನ ಸೊಂಪಾಗಿ ಬೆಳೆದಿದ್ದ ಮರಗಳು ಹೀಗೆ ನೆಲಕಚ್ಚಿವೆ ವಿಡಿಯೋ ನೋಡಿ.. ಹಾಗಂತ ಇದೇನು ಅಭಿವೃದ್ಧಿ ಹೆಸರಲ್ಲಿ ನಡೆದಿರೋ ಮಾರಣಹೋಮವಲ್ಲ.. ಬಿಡಿಎ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನಲ್ಲೇ ಬೆಳೆಸಲಾಗಿದ್ದ ತೇಗ ಸಿಲ್ವರ್ ಜಾತಿಯ ಬೆಲೆ ಬಾಳುವ ವೃಕ್ಷಗಳು.. ಬೆಂಗಳೂರು ಉತ್ತರ ತಾಲೂಕಿನ ಶಿವರಾಮ ಕಾರಂತ ಬಿಡಿಎ ಜಾಗದಲ್ಲಿ ಬೆಳೆದಿದ್ದ ಇದೇ ಮರಗಳ ಮೇಲೆ ಪ್ರಭಾವಿಗಳ ಕಣ್ಣು ಬಿದ್ದು ಈಗ ಮರಗಳೆಲ್ಲಾ ಧರೆಯ ಪಾಲಾಗಿವೆ.. ಹತ್ತಕ್ಕೂ ಹೆಚ್ಚು ಜನ ದುಷ್ಕರ್ಮಿಗಳು ಮರಗಳನ್ನು ಮಾರಿಕೊಳ್ಳಲು ವುಡ್ ಕಟರ್​ ಮಷಿನ್ ಬಳಸಿ ಕ್ಷಣಾರ್ಧದಲ್ಲೇ ಕಡಿದಿದ್ದಾರೆ.. ಸ್ಥಳೀಯರಾದ ಕುಮಾರ್ ಅನ್ನೋರು ಅನುಮಾನ ಬಂದು ಕೂಡಲೇ ಅಧಿಕಾರಿಗೆ ಮಾಹಿತಿ ತಿಳಿಸಿದ್ದಾರೆ.. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಬಿಡಿಎ ಸಿಬ್ಬಂದಿ ಓಡೋಡಿ ಬಂದಿದ್ದಾರೆ.. ಆದರೆ ಅಧಿಕಾರಿಗಳನ್ನ ನೋಡಿದ ಗುಂಪು ಮರಗಳನ್ನ ಅಲ್ಲೇ ಬಿಟ್ಟು ಎಸ್ಕೇಪ್ ಆಗಿದೆ.. ಇನ್ನು ಈ ಕೃತ್ಯದ ಹಿಂದೆ ಸ್ಥಳೀಯ ಬಿಜೆಪಿ ಶಾಸಕ ಎಸ್.ಮುನಿರಾಜು ಕೈವಾಡದ ಶಂಕೆ ವ್ಯಕ್ತವಾಗಿದೆ.. ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿಯೂ ಆಗಿರುವ ಮರಿಸ್ವಾಮಿ ಅವರ ಒಡೆತನದ ಟಿಂಬರ್ ಕಾರ್ಮಿಕರು ಈ ಕೃತ್ಯ ಎಸಗಿರುವ ಆರೋಪ‌ಕೇಳಿ ಬಂದಿದೆ.