ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?

ಮಂಗಳವಾರ ಮತ್ತು ಶುಕ್ರವಾರ ಹಣಕಾಸಿನ ವ್ಯವಹಾರ ಮಾಡುವುದರ ಬಗ್ಗೆ ಜನರಲ್ಲಿ ನಂಬಿಕೆಗಳಿವೆ. ಈ ದಿನಗಳಂದು ಹಿರಿಯರು ಹಣ ಕೊಡಬಾರದು ಎಂದು ಹೇಳುತ್ತಾರೆ. ಶುಕ್ರವಾರ ಮಹಾಲಕ್ಷ್ಮೀ ದೇವಿಗೆ ಪ್ರಿಯ ದಿನ. ಹಣ ವ್ಯವಹಾರ ಮಾಡುವುದರಿಂದ ಧನ ನಷ್ಟವಾಗಬಹುದು ಎಂಬ ನಂಬಿಕೆ ಇದೆ. ಶಾಸ್ತ್ರದ ಪ್ರಕಾರ, ರಾಹುಕಾಲದಲ್ಲಿ ಹಣ ವ್ಯವಹಾರ ಮಾಡಬಾರದು ಎಂದು ಹೇಳಲಾಗಿದೆ.