ಇಂದು (ಮಾರ್ಚ್ 27) ಅಂಬರೀಷ್ ಅಭಿಮಾನಿಗಳ ಪಾಲಿಗೆ ವಿಶೇಷ ದಿನ. ರೇಸ್ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರನ್ನು ಇಡಲಾಗುತ್ತಿದೆ. ಇದರ ಜೊತೆಗೆ ಅಂಬರೀಷ್ ಸ್ಮಾರಕ ಉದ್ಘಾಟನೆಗೊಳ್ಳಲಿದೆ. ಈ ಕಾರಣಕ್ಕೆ ಇಂದಿನ ದಿನ ತುಂಬಾ ವಿಶೇಷ ಎನಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ದೊಡ್ಡಣ್ಣ, ‘ರೇಸ್ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ಇಡುತ್ತಿರುವುದು ಸೂಕ್ತವಾಗಿದೆ. ಅವರು ಕುದುರೆ ಪ್ರಿಯರಾಗಿದ್ದರು. ಅಂಬರೀಷ್ಗೆ ಮನುಷ್ಯರ ಹೆಸರು ನೆನಪಿಲ್ಲದೆ ಇರದಿದ್ದರೂ ಕುದುರೆ ಹೆಸರು ಮರೆಯುತ್ತಿರಲಿಲ್ಲ’ ಎಂದಿದ್ದಾರೆ.