ಅನಾರೋಗ್ಯದ ನಡುವೆಯೂ ಜನ ಸೇವೆಗೆ ನಿಂತ ಡಿಕೆ ಶಿವಕುಮಾರ್; ಕೈಗೆ ಡ್ರಿಪ್ಸ್ ಹಾಕಿಸಿಕೊಂಡು ಬಂದು ಜನಸ್ಪಂದನದಲ್ಲಿ ಭಾಗಿ

ಅನಾರೋಗ್ಯದ ನಡುವೆಯೂ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 'ಮನೆ ಬಾಗಿಲಿಗೆ ಸರ್ಕಾರ, ಇರಲಿ ನಿಮ್ಮ ಸಹಕಾರ' ಜನಸ್ಪಂದನಾ (Jana Spandana) ಕಾರ್ಯಕ್ರಮ ಇಂದು ಬೆಂಗಳೂರಿನ ಪೂರ್ವ ವಲಯದಲ್ಲಿ ಹೆಬ್ಬಾಳ, ಶಿವಾಜಿನಗರ, ಪುಲಿಕೇಶಿನಗರ ಕ್ಷೇತ್ರದಲ್ಲಿ ನಡೆಯುತ್ತಿದೆ. ಬೆಂಗಳೂರಿನ ಸೇಂಟ್ ಜಾನ್ಸ್ ರಸ್ತೆಯ RBANMS ಹೈಸ್ಕೂಲ್​ನಲ್ಲಿ ಜನಸ್ಪಂದನಾ ಕಾರ್ಯಕ್ರಮ ಆರಂಭವಾಗಿದ್ದು ಜ್ವರದಿಂದ ಬಳಲುತ್ತಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅನಾರೋಗ್ಯದ ನಡುವೆಯೂ ಕಾರ್ಯಕ್ರಮಕ್ಕೆ ಬಂದು ಜನರ ಸಮಸ್ಯೆ ಆಲಿಸುತ್ತಿದ್ದಾರೆ.