‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್; ದಾಸನ ಪ್ರತಿಕ್ರಿಯೆ ನೋಡಿ..

ಜಾಮೀನು ಸಿಗುವ ನಿರೀಕ್ಷೆಯಲ್ಲಿ ನಟ ದರ್ಶನ್​ ಅವರನ್ನು ನೋಡಲು ಬಳ್ಳಾರಿ ಜೈಲಿನ ಎದುರು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್​ ನಡೆದು ಬರುವಾಗ ಫ್ಯಾನ್ಸ್​ ಹಲವಾರು ರೀತಿಯಲ್ಲಿ ಜೈಕಾರ ಹಾಕಿದರು. ‘ದೇವರು ಬಂದ್ರು, ಹುಲಿ ಬಂತು’ ಎಂಬಿತ್ಯಾದಿಯಾಗಿ ತಮ್ಮ ನೆಚ್ಚಿನ ನಟನ ಗುಣಗಾನ ಮಾಡಿದರು. ಆ ವಿಡಿಯೋ ಇಲ್ಲಿದೆ ನೋಡಿ..