ನಮ್ಮೂರಿನ ಗೋಮಾಳ ನಮಗೇ ಮೀಸಲಿಡಿ -ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ಕೊಡಬೇಡಿ

ಜಿಲ್ಲಾಧಿಕಾರಿಯಾಗಿ ಒಂದು ಸಮುದಾಯದ ಪರವಾಗಿ ಕೆಲಸ ಮಾಡಬೇಡಿ - ನಮ್ಮೂರಿನ ಗೋಮಾಳ ನಮಗೇ ಮೀಸಲಿಡಿ -ಅಲ್ಪಸಂಖ್ಯಾತರ ವಸತಿ ನಿಲಯಕ್ಕಾಗಿ ಬರೆದುಕೊಡಬೇಡಿ ಎಂದು ಗಾಜಲದಿನ್ನೆ ಗ್ರಾಮಸ್ಥರು ಜೋರಾಗಿಯೇ ಕೇಳುತ್ತಿದ್ದಾರೆ. ಇನ್ನು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರ ಮೇಲೆ ಈಗಾಗಲೇ ಹಲವು ಆರೋಪಗಳು ಕೇಳಿಬಂದಿವೆ, ಜಿಲ್ಲಾಧಿಕಾರಿಯಾಗಿ ಕೇವಲ ಒಂದು ಸಮುದಾಯದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಜಾಗಗಳನ್ನು ವಕ್ಫ ಬೋರ್ಡ್​ಗೆ ಮಂಜೂರು ಮಾಡಿ ದಾಖಲಾತಿಗಳನ್ನು ಮಾಡುತ್ತಿದ್ದಾರೆ ಅನ್ನೋ ಆರೋಪಗಳು ಡಿಸಿ ಅವರ ಮೇಲೆ ಕೇಳಿ ಬಂದಿದೆ.