ಅಧಿಕಾರಿಗೆ ಹಿಗ್ಗಾಮುಗ್ಗಾ ಬೈದ ಕಾಂಗ್ರೆಸ್ MLA

ರಾಯಚೂರು ಗ್ರಾಮೀಣ ಕಾಂಗ್ರೆಸ್ ಶಾಸಕ (Congress MLA) ಬಸನಗೌಡ ದದ್ದಲ್ (Basanagouda Daddal) ಅವರು ನೀರಾವರಿ ಅಧಿಕಾರಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದೆ. ರೈತರ ಕಷ್ಟಕ್ಕೆ ನೀರಾವರಿ‌ ಅಧಿಕಾರಿಗಳು ಸ್ಪಂದಿಸದ ವಿಚಾರವಾಗಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಸಿಟ್ಟಾದ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.