ರೇಲ್ ವಾಹನವನ್ನು ಕೆಳಗಿಳಿಸುವಾಗ ಅದು ಅಲ್ಲಾಡದ ಹಾಗೆ ಮತ್ತು ಜಾರದ ಹಾಗೆ ನಾಲ್ಕು ಕಡೆಗಳಿಂದ ಬೆಲ್ಟ್ ಗಳನ್ನು ಬಿಗಿಯಲಾಗಿತ್ತು. ವಾಹನವನ್ನು ಲಿಫ್ಟ್ ಬಹಳ ಸಾವಕಾಶವಾಗಿ ಮತ್ತು ಅತ್ಯಂತ ಜಾಗರೂಕತೆಯಿಂದ ಕೆಳಗಿಳಿಸಿತು. ಕಾರ್ಯಾಚರಣೆ ಯಾವುದೇ ಹಾನಿಯಾಗದ ಹಾಗೆ ಪೂರ್ಣಗೊಂಡಾಗ ಬಿಎಂಆರ್ ಸಿಎಲ್ ಸಿಬ್ಬಂದಿ ನಿಟ್ಟುಸಿರಾಗಿ ವಿಜಯದ ಕೇಕೇ ಹಾಕಿತು.