ಬೆಂಗಳೂರು, ಫೆಬ್ರವರಿ 12, 2024: ಭಾರತದ ಪ್ರಮುಖ ಖಾಸಗಿ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಅಲಿಯಾನ್ಸ್ ಲೈಫ್, ನಿನ್ನೆ ಭಾನುವಾರ, ಚಂದ್ರಯಾನ ಮತ್ತು ಸೌರ ಮಿಷನ್, ಆದಿತ್ಯ ಎಲ್1 ಮೂಲಕ ಗಮನಾರ್ಹ ಸಾಧನೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ -ISRO) ಯಶಸ್ಸನ್ನು ಆಚರಿಸಲು ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ #ಪ್ಲಾಂಕಥಾನ್ (Plankthon)ನ ನಾಲ್ಕನೇ ಆವೃತ್ತಿಯನ್ನು ಆಯೋಜಿಸಿತ್ತು. ಈ ಪ್ಲಾಂಕಥಾನ್ ಕಾರ್ಯಕ್ರಮವು ಕಂಪನಿಯ ಅತ್ಯಂತ ಜನಪ್ರಿಯ #PlankForAces ಅಭಿಯಾನದ ಆಚರಣೆಯಾಗಿದೆ. ಈ ಮೂಲಕ ಪ್ಲಾಂಕ್ ಮಾಡುವ ವೀಡಿಯೊವನ್ನು ಅಪ್ಲೋಡ್ ಮಾಡಲು ಆಹ್ವಾನಿಸಲಾಗಿದ್ದು, ಆ ಮೂಲಕ ಇಸ್ರೋದಲ್ಲಿನ ಅದ್ಭುತ ವಿಜ್ಞಾನಿಗಳಿಗೆ ಧನ್ಯವಾದ ಹೇಳಲು ಭಾರತೀಯರನ್ನು ಒಟ್ಟುಗೂಡಿಸಲು ಯೋಜಿಸಲಾಗಿತ್ತು (Guinness World Record).