‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋನಲ್ಲಿ 77 ದಿನಗಳು ಕಳೆದಿವೆ. ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ಬರಲಿದೆ. ಹಾಗಾಗಿ ದೊಡ್ಮನೆಯೊಳಗೆ ಪೈಪೋಟಿ ಹೆಚ್ಚಾಗಿದೆ. ಹೆಚ್ಚು ಅಗ್ರೆಸಿವ್ ಆಗಿ ಆಡಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಆದರೆ ವಿನಯ್ ಗೌಡ ಅವರು ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ. ‘ಇನ್ಮೇಲೆ ಹೊಡೆದಾಡಲ್ಲ. ನಿರ್ಧಾರ ಮಾಡಿದ್ದೇನೆ. ಇದು ನನ್ನ ಪ್ರಾಮಿಸ್. ಎಷ್ಟು ನೀಟಾಗಿ ಆಡೋಕೆ ಆಗುತ್ತೋ ಅಷ್ಟು ನೀಟಾಗಿ ಆಡೋಣ’ ಎಂದು ವಿನಯ್ ಗೌಡ ಹೇಳಿದ್ದಾರೆ. ಈ ಮಾತು ಕೇಳಿ ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರಿಗೆ ಅಚ್ಚರಿ ಆಗಿದೆ. ‘ಇಷ್ಟು ದಿನ ಇವರು ಆಗ್ರೆಸಿವ್ ಆಗಿ ಆಡಿದ್ರು. ಇನ್ಮೇಲೆ ನಾವು ಆ ರೀತಿ ಆಡೋಣ’ ಎಂದು ನಮ್ರತಾ ಗೌಡ ಹೇಳಿದ್ದಾರೆ. ‘ಕಲರ್ಸ್ ಕನ್ನಡ’ ಚಾನೆಲ್ನಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಲೈವ್ ನೋಡುವ ಅವಕಾಶ ಇದೆ.