R Ashok ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ

ಬೆಂಗಳೂರು, ಜುಲೈ 14: ಕರ್ನಾಟಕ ವಿಧಾನಮಂಡಲ ಮುಂಗಾರು ಜಂಟಿ ಅಧಿವೇಶನ ಮುಂದುವರಿದಿದೆ. ವಿಧಾನಸೌಧದಲ್ಲಿ ಆಡಳಿತಾರೂಢ ಕಾಂಗ್ರೆಸ್​ ಪಕ್ಷದ (siddaramaiah) ವಿರುದ್ಧ ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಹಾಲಿನ (milk) ದರ 5 ರೂ. ಯಿಂದ 6 ರೂ.ಗೆ ಹೆಚ್ಚಿಸುವ ನಿರ್ಧಾರ ಇದೆ. ಒಂದು ಕೈಯ್ಯಲ್ಲಿ ಕೊಟ್ಟು, ಎರಡು ಕೈಯಲ್ಲಿ ಬಾಚಿಕೊಳ್ಳುವ ಕೆಲಸ ನಡೆದಿದೆ. ಹಳ್ಳಿ ಕಡೆ ಓಡಾಡಲ್ಲ, ನಗರದಲ್ಲಿ ಓಡಾಡ್ತಾರೆ ಅಷ್ಟೇ. ಸದನದಲ್ಲಿ ಕಾಂಗ್ರೆಸ್ ( congress) ಶಾಸಕರೊಬ್ಬರು ಬಿಟ್ಟಿ ಸಲಹೆ ಕೊಟ್ರು. ಕರ್ನಾಟಕದಲ್ಲಿ ಬೆಲೆ ಏರಿಕೆಯಿಂದ ಜನ ಪರಿತಪಿಸಬೇಕಾಗಿದೆ. ಎಲ್ಲಾ ದರ ಹೆಚ್ಚಾದ್ರೆ ಜನ ಹೇಗೆ ಬದುಕಬೇಕು ಎಂದು ಆರ್. ಅಶೋಕ್ ( R Ashoka) ಗರಂ ಆದರು.