ಒಂದು ತಿಂಗಳ ಹಿಂದೆ ಬೆಲೆಯನ್ನು ಗಗನಕ್ಕೇರಿ ರೈತರ ಬಾಳು ಹಸನಾಗಿಸಿದ್ದ ಟೊಮೆಟೊ ಸದ್ಯ ಪಾತಾಳಕ್ಕೆ ಕುಸಿದಿದೆ. ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಕುಸಿದಿದೆ. ಹದಿನೈದು ಕೆಜಿ ಬಾಕ್ಸ್ ಟೊಮೆಟೊ ಕೇವಲ 200- 400 ರೂಪಾಯಿಗೆ ಹರಾಜಾಗುತ್ತಿದೆ. ಒಂದು ಕೆಜಿ ಟೊಮೆಟೊ 15- 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.