ಕಳ್ಳರಿಂದ ಜಪ್ತುಮಾಡಿದ ಚಿನ್ನಾಭರಣಗಳನ್ನು ಪೊಲೀಸರು ಅವುಗಳ ವಾರಸುದಾರರಿಗೆ ಮರಳಿಸಿದರು. ಇಬ್ಬರು ಗೃಹಿಣಿಯರು ಕಳುವಾಗಿದ್ದ ಚಿನ್ನಾಭರಣ ವಾಪಸ್ಸು ದೊರೆತ ಖುಷಿಯಲ್ಲಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು. ಇಬ್ಬರ ಮನೆಯಲ್ಲೂ ಇದೇ ವರ್ಷ ಫೆಬ್ರುವರಿ ತಿಂಗಳಲ್ಲಿ ಚಿನ್ನದ ಆಭರಣಗಳು ಮತ್ತು ನಗದು ಕಳುವಾಗಿದ್ದವಂತೆ.