ಮೈಸೂರಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿದೆ. ಹೀಗಾಗಿ ಮಳೆ ಹನಿಗಳ ನಡುವೆ ಕೆರೆಯಲ್ಲಿ ಆನೆಗಳು ಜಲಕ್ರೀಡೆ ಆಡಿದ್ದು, ನಾಗರಹೊಳೆ ವನ್ಯ ಜೀವಿಗಳಿಗೆ ವರುಣ ಖುಷಿ ತಂದಿದ್ದಾನೆ. ಕುಟ್ಟ ಬಳಿ ಕೆರೆಯಲ್ಲಿ ಮರಿಯೊಂದಿಗೆ ತಾಯಿ ಆನೆ ಆಟವಾಡುತ್ತಿರುವ ವಿಡಿಯೋವನ್ನು ವನ್ಯಜೀವಿ ಛಾಯಾಗ್ರಾಹಕ ಎಂ.ಎಂ ರವಿಶಂಕರ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.