ಹಕ್ಕಿ ಜ್ವರ ಧೃಡಪಟ್ಟರೂ ಎಗ್ಗಿಲ್ಲದೆ ನಡೀತಿದೆ ನಾಟಿ‌ಕೋಳಿ ಮಾರಾಟ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಹಕ್ಕಿ ಜ್ವರ ದೃಡಪಟ್ಟಿತ್ತು. ಇದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿತ್ತು. ಹಕ್ಕಿ ಜ್ವರ ವರದಿಯಾದ ಬೆನ್ನಲ್ಲೇ ಅಧಿಕಾರಿಗಳು ಕೂಡ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಆದರೆ ಇದೀಗ, ನಾಟಿ ಕೋಳಿಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.