ಧುಮ್ಮಿಕ್ಕಿ ಹರಿಯುತ್ತಿರುವ ದೂದ್ ಗಂಗಾ ನದಿ

ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ಮೈದುಂಬಿ ಹರಿಯುತ್ತಿವೆ. ಜೊತೆಗೆ ಜಿಲ್ಲೆಯ 9 ಠಾಣಾ ವ್ಯಾಪ್ತಿಯ 16 ಸೇತುವೆಗಳು ಜಲಾವೃತವಾಗಿವೆ. ದೂಧ್‌ಗಂಗಾ, ವೇದಗಂಗಾ, ಸಂಗಮ ಸ್ಥಾನ ಕುನ್ನೂರು ಬಳಿಯ ಕುನ್ನೂರು-ಬಾರವಾಡ ಸೇತುವೆ ಜಲಾವೃತವಾಗಿದೆ.