ಅಯೋಧ್ಯೆ ರಾಮಮಂದಿರಕ್ಕೆ ತಲಕಾವೇರಿ ನೀರು ರವಾನೆ

ರಾಮಮಂದಿರಕ್ಕೆ ದೇಶದ ವಿವಿಧ ಪವಿತ್ರ ನದಿಗಳ ನೀರು ರವಾನೆಯಾಗುತ್ತಿದೆ. ಅದರಂತೆ ದಕ್ಷಿಣ ಮಂದಾಕಿನಿ ಕಾವೇರಿ ನದಿಯಿಂದಲೂ ತೀರ್ಥ ರವಾನೆ ಮಾಡಲಾಗಿದೆ. ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಅಖಿಲ ಭಾರತೀಯ ಸಂತ ಸಮಿತಿ, ವಿಶ್ವ ಹಿಂದೂ ಪರಿಷತ್​ ಸದಸ್ಯರು ತೀರ್ಥ ಸಂಗ್ರಹಿಸಿದರು.