ಅರ್ಕಾವತಿ ನದಿಗೆ ತ್ಯಾಜ್ಯ ಸುರಿದವರನ್ನು ಹಿಡಿದು ತರಾಟೆಗೆ ತೆಗೆದುಕೊಂಡ ವಿನೋದ್ ರಾಜ್

ನೆಲಮಂಗಲದಲ್ಲಿನ ತ್ಯಾಜ್ಯ ವಿಲೇವಾರಿ ಮಾಫಿಯಾವನ್ನು ಬಯಲಿಗೆ ಎಳೆಯಲಾಗಿದೆ. ನಟ ವಿನೋದ್​ ರಾಜ್​ ಅವರು ದಂಧೆಕೋರರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾತ್ರೋರಾತ್ರಿ ತ್ಯಾಜ್ಯವನ್ನು ತಂದು ಅರ್ಕಾವತಿ ನದಿಗೆ ಸುರಿಯಲಾಗುತ್ತಿತ್ತು. ಆ ವೇಳೆ ಜನರು ತಡೆದು ನಿಲ್ಲಿಸಿದ್ದಾರೆ. ‘ಇನ್ಮುಂದೆ ಈ ರೀತಿ ಮಾಡಲ್ಲ’ ಎಂದು ತ್ಯಾಜ್ಯ ವಿಲೇವಾರಿ ವಾಹನದ ಚಾಲಕರು ಹೇಳಿದ್ದಾರೆ.