ಚಿಕ್ಕೋಡಿ: ಸೀಟ್‌ಗಾಗಿ ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಮಧ್ಯೆ ಜಗಳ, ವಿಡಿಯೋ ವೈರಲ್

ಚಿಕ್ಕೋಡಿ, ನ.13: ಸೀಟ್‌ಗಾಗಿ ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ನಡುವೆ ಜಗಳ ನಡೆದ ಘಟನೆಯೊಂದು ನಡೆದಿದೆ. ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ - ಬೆಳಗಾವಿ ಮಾರ್ಗದ ಬಸ್‌ನಲ್ಲಿ ನಡೆದಿದೆ ಎನ್ನಲಾದ ಈ ಗಲಾಟೆಯ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಇರುವಂತೆ ನಿಂತುಕೊಂಡ ಮಹಿಳೆ ಮತ್ತು ಬಾಲಕಿ ಹಾಗೂ ಸೀಟ್​ನಲ್ಲಿ ಕುಳಿತುಕೊಂಡ ಮಹಿಳೆ ನಡುವೆ ಜಗಳ ನಡೆದಿದೆ. ಈ ವೇಳೆ ಸೀಟ್​ನಲ್ಲಿದ್ದ ಮಹಿಳೆ ತನ್ನ ಚಪ್ಪಲಿಯಿಂದ ಇಬ್ಬರಿಗೆ ಹೊಡೆದಿದ್ದಾಳೆ. ಈ ವೇಳೆ ಹೊಡೆತ ತಿಂದ ಇಬ್ಬರು ಕಿರುಚಾಡಿ ಕಣ್ಣೀರು ಹಾಕಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಪುರುಷ ಪ್ರಯಾಣಿಕರು, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.