ನಟ ವಿಜಯ್ ರಾಘವೇಂದ್ರ ಅವರು ರಿಯಲ್ ಲೈಫ್ನಲ್ಲಿ ಸಿಗರೇಟ್ ಸೇದುವುದಿಲ್ಲ. ಆದರೆ ಪಾತ್ರದ ಸಲುವಾಗಿ ಕೆಲವೊಮ್ಮೆ ಸಿಗರೇಟ್ ಸೇದಬೇಕಾಗುವುದು ಅನಿವಾರ್ಯ. ‘ಕದ್ದ ಚಿತ್ರ’ ಸಿನಿಮಾದಲ್ಲೂ ಅಂಥ ಒಂದು ದೃಶ್ಯ ಇದೆ. ಅದಕ್ಕಾಗಿ ತಾವು ಸಿಗರೇಟ್ ಸೇದಿದಾಗ ಏನಾಯಿತು ಎಂಬುದನ್ನು ವಿಜಯ್ ರಾಘವೇಂದ್ರ ಅವರು ವಿವರಿಸಿದ್ದಾರೆ. ಅವರ ಪತ್ನಿ ಸ್ಪಂದನಾಗೆ ಸಿಗರೇಟ್ ಬಗ್ಗೆ ವಿರೋಧ ಇತ್ತು. ಅವರು ಎಂದಿಗೂ ಧೂಮಪಾನವನ್ನು ಪ್ರಚೋದಿಸುತ್ತಿರಲಿಲ್ಲ. ಇಂದು ಸ್ಪಂದನಾ ಅವರು ನಮ್ಮೊಂದಿಗೆ ಇಲ್ಲ. ಹೃದಯಾಘಾತದಿಂದ ನಿಧನರಾದ ಪತ್ನಿಯ ನೆನಪು ವಿಜಯ್ ರಾಘವೇಂದ್ರ ಅವರನ್ನು ಕಾಡುತ್ತಿದೆ. ಅದರ ನಡುವೆಯೂ ಅವರು ‘ಕದ್ದ ಚಿತ್ರ’ ಸಿನಿಮಾಗೆ ಪ್ರಮೋಷನ್ ಮಾಡುತ್ತಿದ್ದಾರೆ. ಈ ಸಂದರ್ಶನದಲ್ಲಿ ಸ್ಪಂದನಾ ಬಗ್ಗೆ ವಿಜಯ್ ರಾಘವೇಂದ್ರ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.