ಉಗ್ರಂ ಮಂಜು ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಮಹಾರಾಜನ ಪಟ್ಟ ನೀಡಲಾಗಿದೆ. ಆದರೆ ಅವರ ವಿರುದ್ಧ ತ್ರಿವಿಕ್ರಮ್ ಮತ್ತು ರಜತ್ ಅವರು ತಿರುಗಿ ನಿಂತಿದ್ದಾರೆ. ‘ಹೊಡೆದು ಬಿಸಾಕೋಣ’ ಎಂದು ರಜತ್ ಹೇಳಿದ್ದಾರೆ. ‘ನಾವು ನಿಮ್ಮ ಬೆಂಬಲಕ್ಕೆ ಬರುತ್ತೇವೆ’ ಎಂದು ಭವ್ಯಾ ಹೇಳಿದ್ದಾರೆ. ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎಂದು ರಜತ್ ಮತ್ತು ತ್ರಿವಿಕ್ರಮ್ ಅವರಿಗೆ ಬೇಸರ ಆಗಿದೆ.