ಎರಡನೇ ಪಿಯು ಪರೀಕ್ಷೆಯಲ್ಲಿ ಮಗ ಶೇಕಡ97 ರಷ್ಟು ಅಂಕ ಪಡೆದು ಪಾಸಾಗಿದ್ದನ್ನು ಸೆಲಿಬ್ರೇಟ್ ಮಗ ಮತ್ತು ಹೆಂಡತಿಯನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಮಂಜುನಾಥ್ ತಮ್ಮ ಈ ಪ್ರವಾಸ ಬದುಕಿನ ಅಂತಿಮ ಯಾತ್ರೆ ಆದೀತೆಂದು ಕನಸಲ್ಲೂ ಅಂದುಕೊಂಡಿರಲಾರರು. ಶಿವಮೊಗ್ಗದಲ್ಲಿ ರಿಯಲ್ಟರ್ ಆಗಿದ್ದ ಮಂಜುನಾಥ್ ಅವರ ಭಾವನೆಗಳು, ಮಗನ ಬಗ್ಗೆ ಕಂಡ ಕನಸು ಕಟುಕ ಉಗ್ರರಿಗೆ ಅರ್ಥವಾಗೋದು ಸಾಧ್ಯವಿರಲಿಲ್ಲ