ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಉಡುಪಿ ನಗರಸಭೆ ಒತ್ತು ನೀಡಿದೆ. ಹಸಿರು ಪಟಾಕಿ ಕುರಿತು ಜಾಗೃತಿ ಮೂಡಿಸಿ ಕೆಲವೊಂದು ಸ್ಥಳಗಳನ್ನು ನಿಗದಿಪಡಿಸಿ ಪಟಾಕಿ ಮಾರಾಟಕ್ಕೆ ಸೀಮಿತ ಅವಕಾಶ ಕಲ್ಪಿಸಿದೆ. ಮರಳು ಶಿಲ್ಪದ ಮೂಲಕ ನಗರಸಭೆಯ ಆಯೋಜನೆಯಲ್ಲಿ ಮಲ್ಪೆ ಬೀಚ್‌ನಲ್ಲಿ ದೀಪಾವಳಿ, ಶುಭ ದೀಪಾವಳಿ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.ಶಾಸಕ ಯಶ್‌ಪಾಲ್ ಸುವರ್ಣ ಜನಜಾಗೃತಿಗೊಳಿಸುವ ಮರಳು ಶಿಲ್ಪವನ್ನು ಹಣತೆಯ ದೀಪವನ್ನು ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.