ರಾಮನಗರ ಜಿಲ್ಲೆಯ ಮಂಗಾಡಹಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿಯಂದು ವಿಶೇಷ ಬಾಡೂಟದ ಆಚರಣೆ ನಡೆಯಿತು. ಚನ್ನಪ್ಪಸ್ವಾಮಿ ದೇವರಿಗೆ ನೈವೇದ್ಯವಾಗಿ ನೂರಾರು ಕೆಜಿ ಮಟನ್ ಮತ್ತು ಚಿಕನ್ ಬಳಸಿ ತಯಾರಿಸಿದ ಬಾಡೂಟವನ್ನು ಗ್ರಾಮಸ್ಥರು ಸವಿದಿದ್ದಾರೆ. ಇದು ಹಲವು ವರ್ಷಗಳಿಂದ ನಡೆಯುತ್ತಿರುವ ವಿಶಿಷ್ಟ ಪದ್ಧತಿಯಾಗಿದೆ. ಅಕ್ಕಪಕ್ಕದ ಗ್ರಾಮಗಳ ಜನರು ಕೂಡ ಭರ್ಜರಿ ಊಟ ಸವಿದಿದ್ದಾರೆ.