ಹಲವಾರು ವ್ಯಕ್ತಿಗಳನ್ನು ಹೊತ್ತೊಯ್ಯುತ್ತಿದ್ದ ಬೋಟ್ ಇದ್ದಕ್ಕಿದ್ದಂತೆ ಅಲುಗಾಡಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಬೋಟ್ನಲ್ಲಿದ್ದ ಪ್ರವಾಸಿಗರಲ್ಲಿ ಒಬ್ಬರು ಸಮತೋಲನ ಕಳೆದುಕೊಂಡು ಗರುಡ್ ಚಟ್ಟಿ ಸೇತುವೆಯ ಬಳಿ ಗಂಗಾ ನದಿಯಲ್ಲಿ ಬಿದ್ದಿದ್ದಾರೆ. ಈ ವಿಡಿಯೊದಲ್ಲಿ ಸಾಗರ್ ಪ್ಯಾಡಲ್‌ಗಳನ್ನು ಬಳಸಿ ಬೋಟ್ ಅನ್ನು ಮತ್ತೆ ಏರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಬೋಟ್ನಲ್ಲಿ ಕುಳಿತಿದ್ದ ಜನರು ಅವನನ್ನು ಮತ್ತೆ ಮೇಲೆ ತರಲು ಅವನ ಹತ್ತಿರ ಹೋಗುವುದನ್ನು ಸಹ ಕಾಣಬಹುದು. ಆದರೆ ನದಿಯ ಪ್ರವಾಹ ಎಷ್ಟು ಪ್ರಬಲವಾಗಿತ್ತೆಂದರೆ ಆ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಸಾಗರ್ ಅವರ ಶವವನ್ನು ರಕ್ಷಣಾ ತಂಡವು ಗಂಗಾ ನದಿಯಿಂದ ಹೊರತೆಗೆದಿದೆ. ನಂತರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.