ಸರ್ಕಾರೀ ಬಸ್ಸಿಗೆ ಕಾರು ಗುದ್ದುವ ದೃಶ್ಯ ಕೆಮೆರಾದಲ್ಲಿ ಸೆರೆ

ಅಪಘಾತ ಸಂಭವಿಸಿದ ಕೂಡಲೇ, ಕಾರಿನ ಏರ್ ಬ್ಯಾಗ್ ಗಳು ತೆರೆದುಕೊಂಡಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಕಂಪನಿಯೊಂದರ ಮಾಲೀಕ ಶ್ರೀಧರ್ ಮತ್ತು ಅವರ ಪತ್ನಿ ಅಪಾಯದಿಂದ ಪಾರಾದರೆಂದು ಹೇಳಲಾಗಿದೆ. ನೆಲಮಂಗದ ಡಿವೈ ಎಸ್ ಪಿ ಜಗದೀಶ್ ಸ್ಥಳಕ್ಲೆ ಧಾವಿಸಿ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸ್ಥಗಿತಗೊಂಡಿದ್ದ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.