ಪ್ರಧಾನಿ ಮೋದಿ ಭದ್ರತೆ ಬಯಸಿ 31ನೇ ಬಾರಿಗೆ ರಾಖಿ ಕಟ್ಟಲಿರುವ ಪಾಕ್ ತಂಗಿ!

PM Modi's Pakistani sister |ಅಣ್ಣಯ್ಯ ಪ್ರಧಾನಿ ಮೋದಿ ಭದ್ರತೆ ಬಯಸಿ 31ನೇ ಬಾರಿಗೆ ರಾಖಿ ಕಟ್ಟಲಿರುವ ಪಾಕ್ ತಂಗಿ ಕಮರ್ ಮೊಹ್ಸಿನ್ ಶೇಖ್! ಈ ಬಾರಿ ನಾನೇ 'ರಾಖಿ'ಯನ್ನು ತಯಾರಿಸಿದ್ದೇನೆ, ನಾನು ಅವರಿಗೆ (ಪಿಎಂ ಮೋದಿ) ಕೃಷಿ ಪುಸ್ತಕವನ್ನು ಉಡುಗೊರೆಯಾಗಿ ನೀಡುತ್ತೇನೆ, ಏಕೆಂದರೆ ಅವರು ಓದಲು ಇಷ್ಟಪಡುತ್ತಾರೆ. ಕಳೆದ 2-3 ವರ್ಷಗಳಿಂದ, ಕೋವಿಡ್‌ನಿಂದ ನಾನು ಅವರ ಭೇಟಿಗೆ ಹೋಗಲು ಸಾಧ್ಯವಾಗಲಿಲ್ಲ, ಆದರೆ ಈ ಬಾರಿ ನಾನು ಅವರನ್ನು ಖುದ್ದಾಗಿ ಭೇಟಿಯಾಗುತ್ತೇನೆ ಎಂದು ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.