ಅದ್ಯೊಕೊ ಕಾವೇರಿ ಜಲಾಯನ ಪ್ರದೇಶದ (KRS Water) ಮೇಲೆ ವರುಣ ದೇವ ಮುನಿಸಿಕೊಂಡಿದ್ದಾನೆ.. ಮುಂಗಾರು ಮಳೆ ಕೈ ಕೊಟ್ಟಿದ್ದು ಕನ್ನಂಬಾಡಿ ಕಟ್ಟೆಯ ಒಡಲು ಬರಿದಾಗುತ್ತಿದ್ರೆ ಇತ್ತ ನಾಲೆಗಳಲ್ಲಿ ನೀರಿಲ್ಲದೆ ( irrigation) ರೈತರು ಬೆಳೆದ ಬೆಳೆಗೆ ನೀರು ಹರಿಸಲಾಗದೆ ಕಂಗಾಲಾಗಿದ್ದಾರೆ. ಸಕ್ಕರೆ ನಗರಿ ರೈತರ ಬವಣೆ ಯಾವ ರೀತಿಯಾಗಿದೆ ಅನ್ನೋದ್ರ ಒಂದು ರಿಪೋರ್ಟ್ ನಿಮ್ಮ ಮುಂದೆ. ಕಣ್ಣಾಡಿಸಿದ ಕಡೆಯಲ್ಲ ಬೆಳೆದು ನಿಂತ ಕಬ್ಬು.. ಮತ್ತೊಂದೆಡೆ ನೀರಿಲ್ಲದ ಬತ್ತಿರುವ ನಾಲೆಗಳು.. ಇತ್ತ ನೀರಿಲ್ಲದೆ ಒಣಗುತ್ತಿರುವ ಬೆಳೆದು ನಿಂತ ಕಬ್ಬಿನ ಬೆಳೆ.. ಏನನ್ನ ಮಾಡ್ಬೇಕೆಂದು ಕಂಗೆಟ್ಟಿರುವ ರೈತ.. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ಕಿರುಗಾವಲಿನಲ್ಲಿ. ಹೌದು ಮುಂಗಾರು ಮಳೆ ಕೈ ಕೊಟ್ಟ ಬೆನ್ನಲ್ಲೆ ಸಕ್ಕರೆ ನಗರಿ ಮಂಡ್ಯದಲ್ಲಿ ಬರದ ಛಾಯೆ ಮೂಡಿದೆ.. ಇತ್ತ ಬಿತ್ತಲು ಆಗದೆ ಅತ್ತ ಬೆಳೆದು ನಿಂತ ಬೆಳೆಗಳಿಗು ನೀರು ಹರಿಸಲಾಗದೆ ಅನ್ನದಾತ ಪರದಾಟ (Mandya Farmer) ನಡೆಸುತ್ತಿದ್ದಾನೆ. ಜುಲೈ 5 ರೊಳಗೆ ಮಳೆ ಬಾರದೆ ಹೋದ್ರೆ ಅನ್ನದಾತ ಶೋಚನೀಯ ಪರಿಸ್ಥಿತಿಗೆ ಬಂದು ತಲುಪಲಿದ್ದಾನೆ. ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆ ಆಗ್ತಾಯಿಲ್ಲ ಕನ್ನಂಬಾಡಿ ಕಟ್ಟೆಯ ಒಡಲು ಬರಿದಾಗುತ್ತಿದೆ. 124 80 ಅಡಿ ಸಾಮಾರ್ಥ್ಯವುಳ್ಳ ಕೃಷ್ಣರಾಜಸಾಗರದ ಇಂದಿನ ನೀರಿನ ಮಟ್ಟ ಕೇವಲ 77 ಅಡಿಗೆ ಕುಸಿದಿದೆ. ಇನ್ನು 7 ಅಡಿ ನೀರು ತಗ್ಗಿದ್ರೆ ಉಳಿದ 70 ಅಡಿ ನೀರನ್ನ ಡೆಡ್ ಸ್ಟೋರೆಜ್ ಎಂದು ಘೋಶಿಸಲಾಗುತ್ತೆ. ರಾಜಧಾನಿ ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಜನರಿಗೆ ಕುಡಿಯುವ ನೀರಿಗೂ ಆಹಾಕಾರ ಸೃಷ್ಠಿಯಾಗಲಿದೆ. ಜುಲೈ 5 ರ ಒಳಗೆ ನಿಗದಿತ ಪ್ರಮಾಣದ ಮಳೆ ಆಗದೆ ಹೋದ್ರೆ ಕುಡಿಯುವ ನೀರಿಗು ಸಮಸ್ಯೆ ಎದುರಾಗಲಿದೆ.