ಬೆಂಗಳೂರು ಜಲಮಂಡಳಿಯು ನಗರದಲ್ಲಿ ಕೊಳವೆಗಳ ಮೂಲಕ ಹರಿಸುವ ನೀರಿನ ದರ ಇನ್ನೂ ಹೆಚ್ಚಿಸಿಲ್ಲ ಆದರೆ ಹೆಚ್ಚು ಮಾಡುವ ಆಲೋಚನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅನೇಕ ವರ್ಷಗಳಿಂದ ನೀರಿನ ದರ ಏರಿಸಿಲ್ಲ ಮತ್ತು ಜಲಮಂಡಳಿಯಲ್ಲಿ ಹಣಕಾಸಿನ ಸಮಸ್ಯೆ ಇದೆ ಎಂದು ಅವರು ಹೇಳಿದರು.