ಟಿವಿ9 ಜೊತೆ ಕನ್ನಡದಲ್ಲೇ ಮಾತು ಆರಂಭಿಸಿದ ಚಾಹಲ್

18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿದೆ. ಆದಾಗ್ಯೂ ಕೆಲವು ಫ್ರಾಂಚೈಸಿಗಳು ಈ ಮಿಲಿಯನ್ ಡಾಲರ್ ಟೂರ್ನಿಗೆ ತಯಾರಿ ಆರಂಭಿಸಿವೆ. ಈ ನಡುವೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಟೀಂ ಇಂಡಿಯಾದ ಗೂಗ್ಲಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಟಿವಿ9 ಕನ್ನಡದೊಂದಿಗೆ ಮಾತಿಗೆ ಸಿಕ್ಕಿದ್ದಾರೆ. ವಾಹಿನಿಯ ಆ್ಯಂಕರ್ ಅವಿನಾಶ್ ಯುವನ್ ಅವರೊಂದಿಗೆ ಮಾತನಾಡಿರುವ ಚಾಹಲ್, ಆರ್​ಸಿಬಿಯೊಂದಿಗೆ ಅವರ ಒಡನಾಟ, ಬೆಂಗಳೂರು ಹಾಗೂ ಬೆಂಗಳೂರಿನ ಜನರ ಬಗ್ಗೆ ಅವರಿಗಿರುವ ಅಭಿಪ್ರಾಯ ಹಾಗೂ ಮುಂಬರುವ ಐಪಿಎಲ್​ಗೆ ಅವರ ತಯಾರಿ ಹೇಗಿದ ಎಂಬುದನ್ನು ಹಂಚಿಕೊಂಡಿದ್ದಾರೆ.