ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ರೇಣುಕಾ ಸುಕುಮಾರ್

ವಿಶ್ವ ಮಹಾರಾಷ್ಟ್ರ ಇಲ್ಲವೇ ಗೋವಾಗೆ ಪರಾರಿಯಾಗಿ ಒಂದೆರಡು ವರ್ಷ ಕಾಲ ತಲೆಮರೆಸಿಕೊಳ್ಳುವ ಯೋಚನೆ ಮಾಡಿದ್ದನಂತೆ. ಹೋಟೆಲ್ ಗಳಲ್ಲಿ ಕೆಲಸಕ್ಕೆ ಸೇರಿ ಅಲ್ಲೇ ವಾಸ್ತವ್ಯದ ವ್ಯವಸ್ಥೆ ಮಾಡಿಕೊಳ್ಳುವುದು ಅವನ ಪ್ರವೃತ್ತಿಯಾಗಿತ್ತು ಎಂದು ರೇಣುಕಾ ಹೇಳುತ್ತಾರೆ. ಅಂಜಲಿ ಮತ್ತು ತನ್ನ ನಡುವೆ ಪ್ರೀತಿಯಿತ್ತು ಅಂತ ಅವನು ಹೇಳುತ್ತಾನಾದರೂ ಅದನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು.