ಭಟ್ಕಳದ ಮಾವಿನಕುರ್ವೆ ಬಳಿ ಮೀನುಗಾರಿಕಾ ಬೋಟ್ ಮುಳುಗಡೆ, ನಾಲ್ವರ ರಕ್ಷಣೆ

ಅರಬ್ಬೀ ಸಮುದ್ರದಲ್ಲಿ ಗಾಳಿ ಮಳೆಗೆ ಮೀನುಗಾರಿಕಾ ಬೋಟ್ ಶನಿವಾರ ಬೆಳಗ್ಗೆ ಮುಳುಗಡೆಯಾಗಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ‘ಓಂ ಮಹಾಗಣಪತಿ’ ಹೆಸರಿನ ಬೋಟ್ ಮುಳುಗಡೆಯಾಗಿದೆ. ಬೋಟ್​ನಲ್ಲಿದ್ದ 4 ಮಂದಿ ಮೀನುಗಾರರ ರಕ್ಷಣೆ ಮಾಡಲಾಗಿದೆ. ಮುಳುಗಡೆಯಾಗಿರುವ ಬೋಟ್, ಮಹಾದೇವ ಖಾರ್ವಿ ಎಂಬವರಿಗೆ ಸೇರಿದ್ದಾಗಿದೆ.