ನಡುರಸ್ತೆಯಲ್ಲಿ ಬಿಎಂಡ್ಲ್ಯೂ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ, ಪ್ರಶ್ನಿಸಿದ್ದಕ್ಕೆ ಖಾಸಗಿ ಅಂಗ ತೋರಿಸಿದ ಯುವಕ

ಸಂಚಾರ ದಟ್ಟಣೆ ಇರುವ ಪ್ರದೇಶದಲ್ಲಿ ಯುವಕನೊಬ್ಬ ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ರಸ್ತೆ ಬದಿಯಲ್ಲಿ ಮೂತ್ರವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸ್ಥಳೀಯರು ಪ್ರಶ್ನಿಸಿದ್ದಕ್ಕೆ ದರ್ಪ ತೋರಿದ ಯುವಕ ಖಾಸಗಿ ಅಂಗ ತೋರಿಸಿ ಅಲ್ಲಿಂದ ಹೋಗಿದ್ದಾನೆ. ಇದೆಲ್ಲವೂ ಮೊಬೈಲ್​ನಲ್ಲಿ ರೆಕಾರ್ಡ್​ ಆಗದೆ. ಯುವಕನನ್ನು ಗೌರವ್ ಅಹುಜಾ ಎಂದು ಗುರುತಿಸಲಾಗಿದೆ