ಇನ್ನೇನು ಕೆಲವೇ ವಾರಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಮುಕ್ತಾಯ ಆಗಲಿದೆ. ಫಿನಾಲೆಗೆ ದಿನಗಣನೆ ಆರಂಭ ಆಗಿದೆ. ಕೊನೇ ಹಂತದಲ್ಲಿ ಕೂಡ ಸ್ಪರ್ಧಿಗಳ ನಡುವಿನ ವೈಮನಸ್ಸು ಸರಿ ಆಗಿಲ್ಲ. ‘ಈ ಮನೆಯಲ್ಲಿ ಯಾವ ಒಬ್ಬ ಸದಸ್ಯರ ಕಥೆ ಫ್ಲಾಪ್ ಆಗುವುದು ಅಂತ ಹೇಳಬೇಕು’ ಎಂದು ಬಿಗ್ ಬಾಸ್ ಆದೇಶಿಸಿದರು. ಅದಕ್ಕೆ ಒಬ್ಬೊಬ್ಬರಿಂದ ಒಂದೊಂದು ಉತ್ತರ ಬಂದಿದೆ. ‘ಪ್ರತಾಪ್ ಕಥೆ ಫ್ಲಾಪ್ ಆಗುತ್ತೆ ಎನಿಸುತ್ತದೆ. ತಾನು ತುಂಬ ಪಾಪ ಎಂಬ ರೀತಿಯಲ್ಲಿ ಮಾತಾಡಿ ಇಲ್ಲಿಯತನಕ ಬಂದಿದ್ದಾನೆ’ ಎಂದು ವಿನಯ್ ಗೌಡ ಹೇಳಿದ್ದಾರೆ. ‘ತನಿಷಾ ಕುಪ್ಪಂಡ ಸ್ಟೋರಿ ಫ್ಲಾಪ್ ಆಗುತ್ತೆ. ಈ ನಡುವೆ ಅವರು ತಮ್ಮ ವ್ಯಕ್ತಿತ್ವಕ್ಕಿಂತ ತುಂಬ ವಿಚಿತ್ರವಾಗಿ ಬದಲಾಗಿದ್ದಾರೆ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ. ಅದೇ ರೀತಿ, ಕಾರ್ತಿಕ್ ಮಹೇಶ್ ಕೂಡ ತನಿಷಾ ವಿರುದ್ಧ ಮಾತನಾಡಿದ್ದಾರೆ. ‘ಆ ಸ್ನೇಹ ಫೇಕ್ ಅಂತ ನನಗೆ ಈಗ ಅನಿಸಿತು. ಬೆಂಕಿಯೇ ಇರಬಹುದು. ಆದರೆ ಸುನಾಮಿ ಬಂದರೆ ಯಾವ ಬೆಂಕಿಯೂ ನಿಲ್ಲಲ್ಲ’ ಎಂದು ಕಾರ್ತಿಕ್ ಹೇಳಿದ್ದಾರೆ. ಈ ಸಂಚಿಕೆ ಜನವರಿ 16ರಂದು ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ.