ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಭಾವನಾತ್ಮಕ ಸಂಬಂಧ ಹುಟ್ಟಬಹುದು ಅದಕ್ಕೆ ನಾವು ಹೇಗೆ ಪ್ರಾಣಿಗಳೊಂದಿಗೆ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಜಾರ್ಖಂಡ್ನ ದಿಯೋಗಢದಲ್ಲಿ ಕೋತಿಯೊಂದು ಹನುಮಂತನ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಹೋಗಿ ಅವರಿಗೆ ಮುತ್ತಿಟ್ಟು ಅಂತಿಮ ವಿದಾಯ ಹೇಳಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕಣ್ಣಂಚಲ್ಲಿ ನೀರು ತರಿಸುತ್ತದೆ. ಕೊನೆಯ ಆಚರಣೆಯವರೆಗೂ ಕೋತಿ ಆ ವ್ಯಕ್ತಿಯ ಮೃತ ದೇಹದ ಪಕ್ಕದಲ್ಲೇ ಇದ್ದಿದ್ದು ಅವರಿಬ್ಬರ ನಡುವಿನ ಬಂಧವನ್ನು ತೋರಿಸುತ್ತದೆ.