My Home Group: ಹೈದ್ರಾಬಾದ್​ನ​ ಮೈ ಹೋಮ್ ಗ್ರೂಪ್‌ ಸಂಸ್ಥೆಗೆ ಗ್ರೀನ್ ಸಮ್ಮಿಟ್‌ ಪ್ರಶಸ್ತಿ

ಬೆಂಗಳೂರು, ಜುಲೈ 20: ಭಾರತೀಯ ಉದ್ಯಮ ಒಕ್ಕೂಟದ ಆರನೇ ಆವೃತ್ತಿಯ ಗ್ರೀನ್ ಪ್ರೋ ಸಮ್ಮಿಟ್ ಪ್ರಶಸ್ತಿಯನ್ನು ಹೈದರಾಬಾದ್ ಮೂಲದ ಮೈ ಹೋಮ್ ಇಂಡಸ್ಟ್ರಿಸ್ ಪ್ರೈ ಲಿ. ಮತ್ತು ಶ್ರೀ ಜಯಜ್ಯೋತಿ ಸಿಮೆಂಟ್ ಪ್ರೈ. ಲಿ. ಮುಡಿಗೇರಿಸಿಕೊಂಡಿವೆ. ಬೆಂಗಳೂರು ನಗರದ ತಾಜ್ ವೆಸ್ಟ್ ಎಂಡ್ ಹೊಟೇಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿಯನ್ನು ಮೈ ಹೋಮ್ ಇಂಡಸ್ಟ್ರಿಸ್​ನ ಮಾರ್ಕೆಟಿಂಗ್ ಮುಖ್ಯಸ್ಥ ಪಿಜೆ ಮಥಾಯ್ ಮತ್ತು ಜಯಜ್ಯೋತಿ ಸಿಮೆಂಟ್​ನ ಕಾರ್ಪೊರೇಟ್ ಮುಖ್ಯಸ್ಥ ಕೆ.ನಾರಾಯಣರಾವ್ ಅವರು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮ ಉದ್ಘಾಟನೆ ನಂತರ ವಿವಿಧ ಕಂಪನಿಗಳ ಮಲಿಗೆಗಳಿಗೆ ಭೇಟಿ ನೀಡಿದ ಗಣ್ಯರು ಮಾಹಿತಿ ಪಡೆದುಕೊಂಡರು.