ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್​; ಬಳ್ಳಾರಿ ಜೈಲಿನಿಂದ ದಾಸ ಕೊಟ್ಟ ಸಿಗ್ನಲ್ ಏನು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಭೇಟಿ ಮಾಡಲು ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಬಳ್ಳಾರಿ ಜೈಲಿಗೆ ತೆರಳಿದ್ದಾರೆ. ಈ ವೇಳೆ ದರ್ಶನ್ ಅವರನ್ನು ನೋಡಲು ಜೈಲಿನ ಹೊರಗೆ ಅಭಿಮಾನಿಗಳು ನೆರೆದಿದ್ದರು. ಸೆಲ್​ನಿಂದ ದರ್ಶನ್​ ಹೊರಗೆ ಬರುತ್ತಿದ್ದಂತೆಯೇ ಫ್ಯಾನ್ಸ್​ ಜೈಕಾರ ಹಾಕಲು ಶುರು ಮಾಡಿದರು. ಈ ವೇಳೆ ದರ್ಶನ್​ ಕೈ ಸನ್ನೆ ಮಾಡಿದರು. ‘ಸದ್ಯದಲ್ಲೇ ನಾನು ನಿಮಗಾಗಿ ಖಂಡಿತಾ ಹೊರಗೆ ಬರುತ್ತೇನೆ’ ಎಂಬ ರೀತಿಯಲ್ಲಿತ್ತು ಅವರ ಸಿಗ್ನಲ್. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..