ಗುಕೇಶ್ ಬಳಿಕ ಪ್ರಗ್ನಾನಂದ ವಿರುದ್ಧವೂ ಸೋತ ಮ್ಯಾಗ್ನಸ್ ಕಾರ್ಲ್ಸನ್

ಕೆಲವೇ ದಿನಗಳ ಹಿಂದೆ ಭಾರತದ ಯುವ ಚೆಸ್ ಚತುರ ಹಾಗೂ ಹಾಲಿ ವಿಶ್ವ ಚಾಂಪಿಯನ್‌ ಡಿ ಗುಕೇಶ್ ವಿರುದ್ಧ ಸೋತಿದ್ದ ನಾರ್ವೆಯ ಗ್ರ್ಯಾಂಡ್‌ಮಾಸ್ಟರ್ ಮತ್ತು ವಿಶ್ವದ ನಂಬರ್-1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್​ ಇದೀಗ ಮತ್ತೊಬ್ಬ ಭಾರತೀಯನೆದುರು ಮಂಡಿಯೂರಿದ್ದಾರೆ. ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್‌ಸ್ಲಾಮ್‌ನಲ್ಲಿ ಭಾರತದ ಯುವ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ನಾಲ್ಕನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.