ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಮಂಜು ತಮ್ಮ ಹೊಸ ಸಿನಿಮಾ ‘ವಿಷ್ಣುಪ್ರಿಯ’ದ ಪ್ರಚಾರಕ್ಕಾಗಿ ದಾವಣಗೆರೆಗೆ ತೆರಳುತ್ತಿರುವ ವೇಳೆ ಶಿರಾ ಬಳಿ ಅವರ ಬಿಎಂಡಬ್ಲು ಕಾರು ಅಪಘಾತಕ್ಕೆ ಈಡಾಗಿದೆ. ಶ್ರೆಯಸ್ ಅವರ ಐಶಾರಾಮಿ ಕಾರಿನ ಒಂದು ಭಾಗಕ್ಕೆ ತೀವ್ರ ಏಟಾಗಿದ್ದು ಮಿರರ್ ಮುರಿದು, ಸಾಕಷ್ಟು ಡೆಂಟ್ ಆಗಿದೆ. ಅಪಘಾತ ಆದ ಕೂಡಲೇ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾರಿನ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಶ್ರೆಯಸ್ ಮಂಜು, ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ದೂರು ಸಹ ದಾಖಲಿದ್ದಾರೆ. ಈ ಅಪಘಾತದಲ್ಲಿ ಶ್ರೆಯಸ್ ಮಂಜುಗೆ ಯಾವುದೇ ಗಾಯಗಳಾಗಿಲ್ಲ.