ಚಿಕ್ಕೋಡಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣ

ಬಸನಗೌಡ ಪಾಟೀಲ್ ಯತ್ನಾಳ್ ನಿಸ್ಸಂದೇಹವಾಗಿ ಒಬ್ಬ ಜನಪ್ರಿಯ ನಾಯಕ ಮತ್ತು ಮಾಸ್ ಲೀಡರ್. ರಾಜ್ಯದ ಯಾವುದೇ ಮೂಲೆಗೆ ಅವರು ಹೋದರೂ ಜನ ಸೇರುತ್ತಾರೆ. ತಮ್ಮ ಇತ್ತೀಚಿನ ಎಲ್ಲ ಭಾಷಣಗಳಲ್ಲಿ ಅವರು ಬಿಜೆಪಿಯ ಅಭ್ಯರ್ಥಿಗಾಗಿ ವೋಟು ಕೇಳುವುದಕ್ಕಿಂತ ಜಾಸ್ತಿ, ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದು ತಾನು ಮುಖ್ಯಮಂತ್ರಿಯಾಗುವ ಬಗ್ಗೆ ಮಾತಾಡುತ್ತಿದ್ದಾರೆ.