ಕೊಪ್ಪಳ: ಆಂಜನೇಯ ಸ್ವಾಮಿ ಅಲೈ ದೇವರಿಗೆ ಹೂ ನೀಡಿ ಆರ್ಶಿವಾದ ಮಾಡಿದ ಪವಾಡದ ಸದೃಶ್ಯ ಘಟನೆ ಇಂದು ಶನಿವಾರ ನಡೆದಿದೆ. ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಈ ವಿಶೇಷ ಘಟನೆ ನಡೆದಿದೆ. ಕತ್ತಲ್ ರಾತ್ರಿ ಹಿನ್ನೆಲೆ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಈ ಪವಾಡ ನಡೆದಿದೆ. ಈ ಮಾದರಿಯಲ್ಲಿ ದೇವರುಗಳ ಸೌಹಾರ್ದಕ್ಕೆ ಎಲ್ಲೆಡೆ ಮೆಚ್ಚುಗೆಯಾಗಿದೆ. ಅದೇ ಗ್ರಾಮದ ಹಜಿಮ್ ಸಾಬ್ ಎನ್ನುವ ವ್ಯಕ್ತಿಯಿಂದ ನಡೆಯುವ ಸವಾರಿ ಇದಾಗಿದೆ. ಹಜಿಮ್ ಸಾಬ್ ಮುಸ್ಲಿಂ ಆಗಿದ್ದರೂ ಆಂಜನೇಯ ಸ್ವಾಮಿಯ ಅಪ್ಪಟ ಭಕ್ತರು. ಆಂಜನೇಯ ಹೂ ನೀಡುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಒಟ್ಟಿನಲ್ಲಿ ಆಂಜನೇಯನ ಈ ಪವಾಡ ಭಾವೈಕ್ಯತೆಗೆ ಸಾಕ್ಷಿಯಾಗಿದೆ.