ಅಮುಲ್ ಮತ್ತು ನಂದಿನಿ ಎರಡಕ್ಕೂ ಸ್ವಂತ ಸಾಮರ್ಥ್ಯದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡ್ಡಿಂಗ್ ಮಾಡಿ ಗೆಲ್ಲುವಷ್ಟು ಕ್ಷಮತೆ ಇದೆ. ಬೇರೆ ರಾಷ್ಟ್ರಗಳಲ್ಲೂ ನಂದಿನಿ ತನ್ನ ಮಳಿಗೆಗಳನ್ನು ಸ್ಥಾಪಿಸಲಿ ಎಂಬ ಸದುದ್ದೇಶವನ್ನು ತಾನು ಹೊಂದಿದ್ದೇನೆ, ಅದು ಈಗಾಗಲೇ ತನ್ನ ಮಳಿಗೆಗಳನ್ನು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಸ್ಥಾಪಿಸಿದೆ, ಸಂಸ್ಥೆಗೆ ಶಕ್ತಿ ತುಂಬುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ರವಿ ಹೇಳಿದರು.