ಒಂದೇ ಒಂದು ನಂಬರ್‌ಗೆ 20 ಲಕ್ಷ, ಮತ್ತೊಂದಕ್ಕೆ 3 ಲಕ್ಷ , ಇನ್ನೊಂದಕ್ಕೆ 2 ಲಕ್ಷ..ಹೀಗೆ ಪ್ರತೀ ನಂಬರ್‌ಗಳು ಅಲ್ಲಿ ಲಕ್ಷ ಲಕ್ಷ ಹಣಕ್ಕೆ ಸೇಲ್ ಆಗಿದ್ವು. ಫ್ಯಾನ್ಸಿ ನಂಬರ್‌ಗಳನ್ನ ಹರಾಜಿಗೆ ಇಟ್ಟಿದ್ದ ಸಾರಿಗೆ ಇಲಾಖೆ ತನ್ನ ಬೊಕ್ಕಸವನ್ನ ತುಂಬಿಕೊಂಡಿದೆ. ಬೆಂಗಳೂರಿನ ಜಯನಗರ RTOಗೆ ಸೇರಿದ KA-05/NJ ಸೀರಿಸ್ ನ ಸುಮಾರು 64 ಫ್ಯಾನ್ಸಿ ನಂಬರ್ ಗಳನ್ನು ನಿನ್ನೆ ಗುರುವಾರ ಹರಾಜಿಗೆ ಇಡಲಾಗಿತ್ತು. ಈ ಪೈಕಿ 24 ಫ್ಯಾನ್ಸಿ ನಂಬರ್‌ಗಳು ಹರಾಜಾಗಿದ್ದು, ಸಾರಿಗೆ ಇಲಾಖೆ ಬೊಕ್ಕಸಕ್ಕೆ ಬರೊಬ್ಬರಿ 48 ಲಕ್ಷ ಆದಾಯ ಹರಿದು ಬಂದಿದೆ ಎಂದು ಮಲ್ಲಿಕಾರ್ಜುನ್, ಅಡಿಷನಲ್ ಕಮೀಷನರ್, ರಾಜ್ಯ ಸಾರಿಗೆ ಇಲಾಖೆ ತಿಳಿಸಿದ್ದಾರೆ.