ಪ್ರಧಾನಿ ಮೋದಿ ಫೋಟೋ ಬಳಸಿ ಕಚೇರಿ ಆರಂಭಿಸಿದ ಈಶ್ವರಪ್ಪ

ನಿಸ್ಸಂದೇಹವಾಗಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಷಯವನ್ನು ಕೇಂದ್ರದ ನಾಯಕರ ಗಮನಕ್ಕೆ ತರಲಿದ್ದಾರೆ. ಪ್ರಧಾನಿ ಹೆಸರನ್ನು ಈಶ್ವರಪ್ಪ ನಿರ್ಭೀತಿಯಿಂದ ಬಳಸಿಕೊಂಡಿರುವುದನ್ನು ರಾಜಕೀಯ ತಜ್ಞರು ಹೇಗೆ ವಿಶ್ಲೇಷಿಸಲಿದ್ದಾರೋ? ಈಶ್ವರಪ್ಪ ನಡೆ ಮತ್ತು ನಿರ್ಧಾರಗಳನ್ನು ರಾಜ್ಯ ಬಿಜೆಪಿ ಘಟಕ ಮತ್ತು ವರಿಷ್ಠರು ಇದುವರೆಗೆ ಪಕ್ಷವಿರೋಧಿ ಚಟುವಟಿಕೆ ಅಂತ ಹೇಳಿಲ್ಲ ಮತ್ತು ವಿಜಯೇಂದ್ರ ಒಂದು ನೋಟೀಸನ್ನೂ ಈಶ್ವರಪ್ಪಗೆ ಜಾರಿ ಮಾಡಿಲ್ಲ.