ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದ ಮೂರು ದಿನಗಳ ಗೋಕರ್ಣ ಉತ್ಸವದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಅವರು "ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು" ಎಂಬ ಜನಪ್ರಿಯ ಕನ್ನಡ ಗೀತೆಯನ್ನು ಹಾಡಿದರು. ಸರಿಗಮಪ ಸ್ಪರ್ಧಿಗಳೊಂದಿಗೆ ಅವರು ಧ್ವನಿಗೂಡಿಸಿದರು. ಶುಕ್ರವಾರ ಈ ಉತ್ಸವಕ್ಕೆ ತೆರೆ ಬಿದ್ದಿತು. ಈ ಕಾರ್ಯಕ್ರಮ ಜಿಲ್ಲಾಡಳಿತದಿಂದ ಆಯೋಜಿಸಲ್ಪಟ್ಟಿತ್ತು.