ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಆಟವನ್ನು ಅರ್ಧಕ್ಕೆ ನಿಲ್ಲಿಸಿ ಹೊರಗೆ ಬಂದಿದ್ದಾರೆ. ಕುಟುಂಬದಲ್ಲಿನ ಅನಿವಾರ್ಯ ಕಾರಣದಿಂದ ಅವರು ಈ ಶೋಗೆ ವಿದಾಯ ಹೇಳಿದ್ದಾರೆ. ಇನ್ನುಳಿದ ಸದಸ್ಯರು ಸುರೇಶ್ಗೆ ಧೈರ್ಯ ತುಂಬಿದ್ದಾರೆ. ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದ ಸುರೇಶ್ ಅವರು ಈಗ ಆತಂಕದಲ್ಲಿ ಹೊರನಡೆದಿದ್ದಾರೆ.