Daily Devotional: ದೇವರಿಗೆ ಆರತಿ ಮಾಡುವಾಗ ಕೈ ಜಾರಿದರೆ ಏನು ಸೂಚನೆ?

ಪೂಜೆಯ ಸಮಯದಲ್ಲಿ ಆರತಿ ತಟ್ಟೆ ಬೀಳುವುದು ಅಪಶಕುನವೇ ಎಂಬ ಪ್ರಶ್ನೆಗೆ ಗುರೂಜಿಯವರು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಆರತಿ ತಟ್ಟೆ ಬಿದ್ದರೆ, ಅದು ಪೂಜೆಯಲ್ಲಿನ ಏಕಾಗ್ರತೆ ಮತ್ತು ಶ್ರದ್ಧಾಭಕ್ತಿಯ ಕೊರತೆಯನ್ನು ಸೂಚಿಸುತ್ತದೆ. ಈ ವೇಳೆ ಮನೆದೇವರು ಮತ್ತು ಕುಲದೇವರಿಗೆ ಪ್ರಾರ್ಥನೆ ಮಾಡಿ, ತುಪ್ಪದ ದೀಪವನ್ನು ಬೆಳಗಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.